ದೂಧ್ ಸಾಗರ ( ಹಾಲಿನ ಸಮುದ್ರ ) ಮಹಾದಾಯಿ ನದಿಯಿಂದ ಬೀಳುವ ನಾಲ್ಕು ಹಂತದ ಒಂದು ಜಲಪಾತ. ಇದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿ ಬರುತ್ತದೆ. ಇದು ಪಣಜಿಯಿಂದ ರಸ್ತೆ ಮಾರ್ಗವಾಗಿ ೬೦ ಕಿ.ಮೀ. ದೂರದಲ್ಲಿದೆ ಮತ್ತು ಮಡಗಾವ್-ಬೆಳಗಾವಿ ರೈಲುಮಾರ್ಗದಲ್ಲಿ ಮಡಗಾವಿನಿಂದ ೪೬ ಕಿ.ಮೀ. ಪೂರ್ವದಲ್ಲಿ ಮತ್ತು ಬೆಳಗಾವಿಯಿಂದ ೮೦ ಕಿ.ಮೀ. ದಕ್ಷಿಣಕ್ಕಿದೆ. ೩೧೦ ಮೀ (೧೦೧೭ ಅಡಿ) ಎತ್ತರದಿಂದ ಧುಮುಕುವ ದೂಧ್ ಸಾಗರ ಜಲಪಾತ, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಪಶ್ವಿಮ ಘಟ್ಟದ ಭಗವಾನ ಮಹಾವೀರ ಉದ್ಯಾನ ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನದ ಹತ್ತಿರವಿದೆ. ಈ ಜಲಪಾತವು ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿಯನ್ನು ರೂಪಿಸುತ್ತವೆ. ಈ ಪ್ರದೇಶವು ದಟ್ಟ ಕಾಡಿನಿಂದ ಸುತ್ತುವರಿದಿದೆ. == ಉಲ್ಲೇಖಗಳು ==